Loading...

Ананда Але, издание на языке каннада

ಬುದ್ಧನು ’ಆಸೆಯೇ ದುಃಖಕ್ಕೆ ಮೂಲ’ ಎಂದು ಹೇಳಿದನೆಂದು ಎಲ್ಲರೂ ನಂಬಿ, ಆಸೆಗಳ ಬಗ್ಗೆ ಒಂದು ವಿಧವಾದ ವೇದಾಂತವನ್ನು ಬೆಳಸಿಕೊಂಡಿರುವಾಗ, ಸದ್ಗುರುಗಳು ಈ ಪುಸ್ತಕದಲ್ಲಿ – ’ಆಸೆ ಪಡುವುದರಲ್ಲಿ ಜಿಪುಣತನವೇಕೆ, ಎಲ್ಲದಕ್ಕೂ ಆಸೆಪಡಿ, ಹಾಗೂ ಅವುಗಳನ್ನು ಸಾಧಿಸಿಕೊಳ್ಳಿ’ ಎನ್ನುತ್ತಾರೆ.

Первоначальная цена составляла 450.00₹.Текущая цена: 259.00₹.

MRP
Вес300 г
Brand

ಆನಂದ ಅಲೆ – ಆಸೆ ಪಡು, ಸಾಧಿಸು…

ಜೀವನದಲ್ಲಿ ಜಯಶಾಲಿಗಳಾಗಬೇಕೆಂಬ ಆಸೆಯಿಲ್ಲದ ಮನುಷ್ಯರಿದ್ದಾರೆಯೆ? ಗೆಲುವೆಂದರೆ ಏನು? ಆಸೆಪಡುವುದು ಮತ್ತು ಅದನ್ನು ಸಾಧಿಸುವುದು, ಹೌದು ತಾನೆ? ಬಯಸುವುದನ್ನು ಗಳಿಸಲು ಅದಕ್ಕಿರುವ ಮೂಲ ಆಕರ್ಷಣೆ ಏನು? ಆನಂದವಾಗಿರುವುದು, ಅಲ್ಲವೇ? ದುಃಖದಲ್ಲಿರುವವರಿಗೆ ಗೆಲುವು ತಾನೆ ಹೇಗೆ ಬರುತ್ತದೆ? ನೀವು ಆನಂದವಾಗಿರಬೇಕಾದರೆ ಅದಕ್ಕೆ ಯಾರು ಹೊಣೆ? ನಿಮ್ಮ ತಂದೆ-ತಾಯಿಯೆ? ಗಂಡನೆ? ಹೆಂಡತಿಯೆ? ಮಗುವೆ? ಸ್ನೇಹಿತರೆ? ನೆರೆಮನೆಯವನೆ? ಪರರಾಷ್ಟ್ರದವನೆ? ನೀವು ಬಯಸುವುದೆಲ್ಲವನ್ನೂ ಆನಂದವಾಗಿ ಪಡೆಯುವ ಮಾರ್ಗ ಯಾವುದು? ಈ ಸನ್ನಿವೇಶವನ್ನು ಯೋಚಿಸಿ ನೋಡಿ… ಸಂಜೆಯ ಸಮಯ. ಬೆಟ್ಟದ ತುದಿಯಲ್ಲಿ ಮೋಡಗಳು ಆವರಿಸಿಕೊಂಡಿವೆ. ಹಿನ್ನೆಲೆಯಲ್ಲಿ ಸೂರ್ಯಾಸ್ತವಾಗುತ್ತಿದೆ. ಇಂತಹ ರಮ್ಯವಾದ ದೃಶ್ಯವನ್ನು ನೋಡುತ್ತೀರಿ. ಅದು ಇರುವುದು ಎಲ್ಲಿ? ಆ ಬೆಟ್ಟದಲ್ಲಿಯೆ? ಅಕಾಶದಲ್ಲಿಯೆ? ನಿಧಾನವಾಗಿ ಯೋಚಿಸಿ. ಇದೆಲ್ಲಾ ನಡೆಯುತ್ತಿರುವುದು, ನಿಮ್ಮೊಳಗೆ… ಅಲ್ಲವೇ? ಕೇಳುವ ಧ್ವನಿ, ಆಘ್ರಾಣಿಸುವ ವಾಸನೆ, ಅನುಭವಿಸುವ ಸ್ಪರ್ಶ ಎಲ್ಲವೂ ನಿಮ್ಮೊಳಗೇ ನಡೆಯುವುದಲ್ಲವೆ? ಬೆಳಕು-ಕತ್ತಲೆ, ಶಬ್ದ-ನಿಶ್ಶಬ್ದ, ವೇದನೆ-ಆನಂದ ಇವೆಲ್ಲವೂ ನಿಮ್ಮೊಳಗೇ ನಡೆಯುತ್ತದೆ. ಜೀವನವೆಂದರೆ ಹೀಗೆಯೇ, ಅದನ್ನು ಅಗತ್ಯಕ್ಕೆ ತಕ್ಕ ಹಾಗೆ ರೂಪಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಎಲ್ಲವೂ ನಿಮ್ಮ ಕೈಯಲ್ಲಿಯೇ ಇದ್ದರೂ, ನೀವು ಆಸೆಪಡುವುದು ಮಾತ್ರ ಅದೇಕೆ ಹಾಗೆಯೇ ನಡೆಯುತ್ತಿಲ್ಲ? ಏಕೆಂದರೆ ನೀವು ಆನಂದವಾಗಿರಬೇಕೆಂದರೆ ನೂರು ನಿರ್ಬಂಧಗಳನ್ನು ಹಾಕಿಕೊಳ್ಳುತ್ತೀರಿ. ತಪ್ಪು ನಡೆದದ್ದು ಎಲ್ಲಿ? ಇದು ನಿಮ್ಮ ತಪ್ಪೆ ಅಥವಾ ಆಸೆಯ ತಪ್ಪೆ? ತಿಳಿದುಕೊಳ್ಳಲು ಓದಿ… ಸದ್ಗುರುಗಳ ಆನಂದ ಅಲೆ… ಆಸೆ ಪಡು, ಸಾಧಿಸು…

Вы недавно просматривали

Products not found.

Новинки

Лидеры продаж