Loading...

Asaeye Anantha, издание на языке каннада

ಆಸೆಯೇ ದುಃಖಕ್ಕೆ ಮೂಲ ಎಂದು ಗೌತಮ ಬುದ್ಧ ಹೇಳಿದನೆಂದು ಜನ ನಂಬುತ್ತಾರೆ. ಆದರೆ ಆಸೆಗಳನ್ನು ಬಿಡಬೇಕು ಎನ್ನುವುದೂ ಒಂದು ಆಸೆ ತಾನೆ! ಆಸೆ-ಬಯಕೆಗಳಿಲ್ಲದೆ ಬದುಕೇ ಸಾಧ್ಯವಿಲ್ಲ. ಆಸೆಗಳನ್ನೇ ಬಿಟ್ಟುಬಿಡುವುದು ಮರಣಕ್ಕೆ ಸಮಾನ, ಜೀವನಕ್ಕೆ ವಿರುದ್ಧವಾದುದು ಎಂಬುದು ಸದ್ಗುರುಗಳ ವಿಚಾರ.

Первоначальная цена составляла 200.00₹.Текущая цена: 150.00₹.

MRP
Вес300 г
Brand

ನಮ್ಮ ಬದುಕಿನಲ್ಲಿ ಉದ್ಭವಿಸುವ ಎಲ್ಲ ಹಿರಿಯ-ಕಿರಿಯ ದುಃಖ ದುಮ್ಮಾನಗಳಿಗೆ ನಮ್ಮ ಆಸೆಗಳೇ ಕಾರಣ, ಆದುದರಿಂದ ನಾವು ಆಸೆಗಳನ್ನು ಬಿಡಬೇಕು ಎಂದು ಅನೇಕ ಮತಧರ್ಮಗಳು ಹೇಳುತ್ತಾ ಬಂದಿವೆ. ಈ ಅಭಿಪ್ರಾಯ ಎಷ್ಟರಮಟ್ಟಿಗೆ ಬೇರೂರಿದೆಯೆಂದರೆ, ಆಸೆಗಳನ್ನು ಬಿಟ್ಟುಬಿಡುವುದೇ ಒಂದು ಮಹತ್ಸಾಧನೆ ಎನ್ನುವಂತಾಗಿದೆ. ಆಸೆಯೇ ದುಃಖಕ್ಕೆ ಮೂಲ ಎಂದು ಗೌತಮ ಬುದ್ಧ ಸಾರಿಹೇಳಿದನೆಂದೂ ಜನ ನಂಬುತ್ತಾರೆ.

ಇದಕ್ಕೆ ಸದ್ಗುರುವಿನ ಪ್ರತಿಕ್ರಿಯೆ – “ಆಸೆಯೇ ದುಃಖಕ್ಕೆ ಮೂಲ” ಎಂಬಂತಹ ತಿಳಿಗೇಡಿತನದ ಮಾತನ್ನು ಗೌತಮ ಬುದ್ಧನು ಹೇಳಿರಲು ಸಾಧ್ಯವಿಲ್ಲ. ಆಸೆಗಳನ್ನು ಬಿಡಬೇಕು ಎನ್ನುವುದೂ ಒಂದು ಆಸೆ ತಾನೆ! ಆಸೆ-ಬಯಕೆಗಳಿಲ್ಲದೆ ಬದುಕೇ ಸಾಧ್ಯವಿಲ್ಲ. ಆಸೆಗಳನ್ನೇ ಬಿಟ್ಟುಬಿಡುವುದು ಮರಣಕ್ಕೆ ಸಮಾನ, ಜೀವನಕ್ಕೆ ವಿರುದ್ಧವಾದುದು ಎನ್ನುತ್ತಾರೆ ಸದ್ಗುರು.

ಸದ್ಗುರುವಿನ ಅಭಿಮತ – ಆಸೆಗಳನ್ನು ಇರಿಸಿಕೊಳ್ಳಿ, ಆದರೆ ಇದರಲ್ಲಿ ಕಂಜೂಸ್‌ತನ ಬೇಡ, ಎಲ್ಲದಕ್ಕೂ ಆಸೆಪಡಿ. ಆಸೆಗಳನ್ನೂ ಇಡೇರಿಸಿಕೊಳ್ಳುವ ಪ್ರಯತ್ನದಲ್ಲಿ ಬೆಳೆಯಿರಿ. ಬೆಳೆಯುತ್ತಾ ಆಸೆಗಳನ್ನು ವಿಸ್ತರಿಸುತ್ತಾ ,ವಿಸ್ತರಿಸುತ್ತಾ ಅನಂತವನ್ನೇ ಆಶಿಸಿ. ಈ ಆಸೆಯನ್ನು ಈಡೇರಿಸಿಕೊಳ್ಳುವುದೇ ಜೀವನ. ಆಸೆಯೇ ಅನಂತ.

ಸದ್ಗುರುವಿನ ಈ ವಿಚಾರಧಾರೆ ಮೊದಲಬಾರಿಗೆ ತಮಿಳಿನ ‘ಆನಂದ ವಿಕಟನ್’ ವಾರಪತ್ರಿಕೆಯಲ್ಲಿ ನಾಲ್ಕು ವರ್ಷ ಕಾಲ ಜನಪ್ರಿಯ ಧಾರಾವಾಹಿಯಾಗಿ ಮೂಡಿಬಂದಿತು. ನಂತರ ಕನ್ನಡದ ಸುಧಾ ವಾರಪತ್ರಿಕೆಯಲ್ಲೂ ಪ್ರಕಟವಾಯಿತು. ಅದನ್ನು ಇಲ್ಲಿ ಪುಸ್ತಕ ರೂಪದಲ್ಲಿ ಪ್ರಸ್ತುತಗೊಳಿಸಲಾಗಿದೆ.

Вы недавно просматривали

Products not found.

Новинки

Лидеры продаж